ಪಾವನ ಕಟೀಲಲಿ ನಂದಿನಿ ಹರಿವಳು
ಪಾವನ ಕಟೀಲಲಿ ನಂದಿನಿ ಹರಿವಳು
ಆನಂದ ಮಹದಾನಂದ ಪಾವನ
ದುರಿತಗಳೆಲ್ಲವು ದೂರವಾಗುವುದು2
ಕಳೆಯುವುದು ಎಲ್ಲಾ ಭವಬಂಧಾ2
ಪಾವನ
ನವರಾತ್ರಿಯಲಿ ನವವಿಧ ಪೂಜೆಯನು
ಸ್ವೀಕರಿಸಿವಳು ಭ್ರಮರಾಂಬಿಕೆಯು
ನವರಾತ್ರಿಯಲಿ
ಪರಿಪರಿಯಿಂದಲಿ ಬೇಡಿರೆ ಅವಳನ್ನು2
ವರಗಳ ನೀಡಿ ಪೊರೆವಳು ನಮ್ಮ2
ಪಾವನ
ಹೂವಿನ ಪೂಜೆಯ ಅಲಂಕಾರದಲಿ
ಶೋಭಿಸುತಿಹಳು ದುರ್ಗಾಂಬಿಕೆಯು
ಭ್ರಮರಾಂಬೆ ನಮಃ ಕಟೀಲಾಂಬೆ ನಮಃ2
ಭೂಮಿಯ
ಪಟ್ಟೆ ಪೀತಾಂಬರದ ಸೀರೆಯ ಧರಿಸುತ2
ಸರ್ವಮಂಗಳೆ ಇವಳು ಜಗದಂಬಿಕೆಯು2
ಪಾವನ
Comments
Post a Comment